Surprise Me!

ಬಿಡುಗಡೆಯಾದ 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ ‘ಕಿರಿಕ್ ಪಾರ್ಟಿ’ | Filmibeat Kannada

2017-11-17 4 Dailymotion

"ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ...ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ'.ಈ ಹಾಡನ್ನ ಗುನುಗುತ್ತಾ ಅದೇಷ್ಟು ಜನ ಯುವಕರು ತಮ್ಮ ಪ್ರೇಯಸಿ ಬಗ್ಗೆ ಯೋಚನೆ ಮಾಡಿರುತ್ತಾರೋ ಗೊತ್ತಿಲ್ಲ. ವರ್ಷಗಳು ಕಳೆದರೂ, ಮತ್ತಷ್ಟು ಮಧುರವಾದ ಹಾಡುಗಳು ಬಂದರೂ, ಈ ಹಾಡಿನ್ನ ಕ್ರೇಜ್ ಮಾತ್ರ ಇನ್ನು ಕಮ್ಮಿಯಾಗಿಲ್ಲ.ಹೌದು, 'ಕಿರಿಕ್ ಪಾರ್ಟಿ' ಚಿತ್ರದ ಈ ಹಾಡು ಯ್ಯೂಟ್ಯೂಬ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಒಂದು ವರ್ಷದಲ್ಲಿ ಸುಮಾರು 4 (40,067,539) ಕೋಟಿಗೂ ಅಧಿಕ ಬಾರಿ ಈ ಹಾಡನ್ನ ಯ್ಯೂಟ್ಯೂಬ್ ನಲ್ಲಿ ನೋಡಿದ್ದಾರೆ. ಈ ಮೂಲಕ ಕನ್ನಡದ ಹಾಡೊಂದು 40 ಮಿಲಿಯನ್ ವೀಕ್ಷಕರನ್ನ ಹೊಂದಿರುವುದು ಇದೇ ಮೊದಲು.ಅಂದ್ಹಾಗೆ, ಈ ಹಾಡಿಗೆ ಧನಂಜಯ ರಂಜನ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನವೆಂಬರ್ 25, 2016 ರಂದು ಯೂಟ್ಯೂಬ್ ನಲ್ಲಿ ಅಪ್‌ ಲೋಡ್ ಮಾಡಲಾಗಿತ್ತು. ಇನ್ನು 10 ದಿನ ಆದ್ರೆ, ಈ ಹಾಡಿಗೆ ಒಂದು ವರ್ಷದ ಸಂಭ್ರಮ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಸೇರಿದಂತೆ ಹಲವರು ಅಭಿನಯಿಸಿದ್ದರು <br /> <br />kirik party has created anew recored and also completed 100 days in which the song "belageddu yaara mukava naanu nodidhe, has crossed 4 million views in you Tube,as this is a great achivement in sandalwood.

Buy Now on CodeCanyon